Overblog
Edit post Follow this blog Administration + Create my blog
merabharat.over-blog.com

ಹೆತ್ತ ತಾಯಿ ಹೊತ್ತ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು

ಅಮೇರಿಕಾ ನೀಡಿದ ಮರ್ಮಾಘಾತಕ್ಕೆ ಚೀನಾ ತೊಡೆಯ ಮೇಲೆ ಸೆಡ್ಡು ಹೊಡೆದ ಪಾಕ್!!

     ೧೧-೦೯-೨೦೦೧ ರ WTC ಕಟ್ಟಡವು ಉಗ್ರರ ದಾಳಿಗೆ ತುತ್ತಾಗಿ,   ಮುಗ್ದ ಜನಗಳ ಮಹಾ ಮಾರಣ ಹೋಮವೇ ನಡೆದು ಹೋಗಿತ್ತು, ಆ ಘಟನೆಗೆ ಪ್ರಮುಖ ಕಾರಣವಾಗಿದ್ದ ಅಲ್ ಖೈದಾ ಮುಖ್ಯಸ್ಥ  ಓಸಮಾ ಬಿನ್ ಲಾಡೆನ್ ಮಾತ್ರ ತಲೆ ಮರೆಸಿಕೊಂಡಿದ್ದ, ಆತನ ಬಂಧನಕ್ಕಾಗಿ ಅಮೇರಿಕಾ ರಾಷ್ಟ್ರ ಹಲವಾರು ತಂಡಗಳನ್ನು ರಚಿಸಿ, ಉಗ್ರ ಲಾಡೆನ್ ನನ್ನು ಹಿಡಿಯಲು ವ್ಯವಸ್ಥಿತ  ಬಲೆಯನ್ನು ಬೀಸಿದ್ದರು, ಇಡೀ ವಿಶ್ವವೆಲ್ಲಾ ಹುಡುಕಾಡಿದರೂ ಲಾಡೆನ್ ನ  ಸುಳಿವು ಅಮೇರಿಕಾದ.  ಬೇಹುಗಾರಿಕಾ ಸಂಸ್ಥೆಗಳಿಗೆ ಸಿಗಲಿಲ್ಲ,   ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಮೇರಿಕಾ ಆಪ್ತ ಪಾಕಿಸ್ತಾನದ ಮೇಲೆ ಸಂಶಯಪಡುವ ಗೋಜಿಗೆ ಹೋಗಲೆ ಇಲ್ಲ, ಪಾಕ್ ನ ಸ್ನೇಹದ ಮೂಲಕ ಪಾಕ್ & ಅಪ್ಘಾನಿಸ್ತಾನದಲ್ಲಿನ ಭಯೋತ್ಪಾದನೆಯನ್ನು ನಿಗ್ರಹಿಸುವ ಹೆಸರಲ್ಲಿ ಸೊವಿಯತ್ ಸೇನೆಯ ಜೊತೆ ಸ್ಪರ್ಧೆಗೆ ಇಳಿದಿತ್ತು ಅಮೇರಿಕಾ, ಮತ್ತು ಅದಕ್ಕಿಂತ ಹೆಚ್ಚಾಗಿ ಚೀನಾ ಮತ್ತು ಭಾರತ ರಾಷ್ಟ್ರವನ್ನು  ಪಾಕ್ ಮೂಲಕ ಹಣಿಯಲು ಅಮೇರಿಕಾ ಪ್ರಯತ್ನಿಸಿತ್ತು ಆದರೆ ಭಾರತ ಶಾಂತಿಪ್ರೀಯ ದೇಶವಾಗಿದ್ದರಿಂದ ಪಾಕ್ ನ ಪುಂಡಾಟಿಕೆಯನ್ನು ಸಹಿಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಪಾಕ್ ಗೆ ಪೆಟ್ಟು ನೀಡುತ್ತಾ  ಬಂದಿತ್ತು.     

       "ಉಂಡ ಮನೆಗೆ ದ್ರೋಹ ಬಗೆದ ಪಾಕ್ " 

WTC ಕಟ್ಟಡದ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಲಾಡೆನ್ ನ ಚಲನವಲನವನ್ನ ಬೆನ್ನು ಹತ್ತಿದ್ದ ಅಮೇರಿಕಾದ ಬೇಹುಗಾರಿಕಾ ತಂಡ ಕೊನೆಗೊಂದು ದಿನ ಮೇ-೧-೨೦೧೧ ರಂದು ಅಮೇರಿಕಾದ ವಿಶೇಷ ಕಾರ್ಯ ಪಡೆ ಆಪರೇಶನ್ ಎಕ್ಸ್ ಕಾರ್ಯಾಚರಣೆ ಮೂಲಕ ಪಾಕ್ ನ ಅಬಟೋಬಾದನಲ್ಲಿರುವ ಲಾಡೆನ್ ನಿವಾಸಕ್ಕೆ ನುಗ್ಗಿ ರಾತ್ರಿ ೧೦:೩೦ ರ ಹೊತ್ತಿಗೆ ಲಾಡೆನ್ ನ ಕಥೆ ಮುಗಿಸಿದ್ದರು. ಆದರೆ ಅಮೇರಿಕಾಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನನ್ನು ಆಪ್ತ ರಾಷ್ಟ್ರ ಪಾಕ್ ಆಶ್ರಯ ನೀಡಿತ್ತು, ಆದಾಗ್ಯೂ ಅಮೇರಿಕಾ ಸಹಿಸಿಕೊಂಡು ಮತ್ತೆ ೦೭ ವರ್ಷ ಸಹಿಸಿಕೊಂಡು ಬಂದಿತ್ತು, ಆದರೆ ಪಾಕ್ ಗುಣ ಮಾತ್ರ ಬದಲಾಗಲೇ ಇಲ್ಲ, ಕಾಕತಾಳಿಯವೆಂಬಂತೆ ಅಮೇರಿಕಾ ದಲ್ಲೂ ಅಧ್ಯಕ್ಷರೂ ಬದಲಾಗಿದ್ದರ ಪರಿಣಾಮ ಪಾಕ್ ಮಾತ್ರ ಟ್ರಂಪ್ ರ ವಿಶ್ವಾಸಗಳಿಸುವಲ್ಲಿ ಎಡವಿತ್ತು, ಕಾರಣ ಟ್ರಂಪ್  ಮೊದಲಿಂದಾನೂ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ನನ್ನ ಮೂಲ ಉದ್ದೇಶ ಭಯೋತ್ಪಾದನೆಗೆ ಬೆಂಬಲಿಸುವ ರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸುವೆ ಎನ್ನುತ್ತಲೆ ಅಧಿಕಾರಕ್ಕೆರಿದ್ದ ಟ್ರಂಪ್ ಭಯೋತ್ಪಾದನೆ ನಿರ್ಮೂಲನೆ ಕುರಿತು ಪಾಕ್ ಗೆ ಬುದ್ಧಿ ಮಾತು ಹೇಳಿ ಹೇಳಿ ಸಾಕಾಗಿ, ಕೊನೆಗೆ  ಪಾಕ್ ರಾಷ್ಟ್ರದ ಅಭಿವೃದ್ಧಿಗಾಗಿ ಮತ್ತು ಭಯೋತ್ಪಾದನೆ ನಿಗ್ರಹಿಸಲು ಸೇನಾ ಒಪ್ಪಂದ  ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಆರ್ಥಿಕ ಸಹಾಯವನ್ನು ಮಾಡುತ್ತಾ ಬಂದಿದ್ದ ಅಮೇರಿಕಾ ಇಂದು ನಿಲ್ಲಿಸಿದೆ. 

ಇದರಿಂದ ಹತಾಸೆಗೊಳಗಾಗಿರುವ ಪಾಕಿಸ್ತಾನದ ಪರಸ್ಥಿತಿ ಮಾತ್ರ ಬಾರಿ ಚಿಂತಾಜನಕವಾಗಿದೆ. ಪಾಕ್ ರಾಷ್ಟ್ರದ ಪರಸ್ಥಿತಿಯನ್ನು ಕಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಅಂದರೆ ಪಾಕಿಸ್ತಾನವನ್ನು ಬಳಸಿಕೊಂಡು ಭಾರತವನ್ನು ಹತ್ತಿಕ್ಕಲು ಚೀನಾ ಪಾಕ್ ನ ಬೆಂಬಲಕ್ಕೆ ನಿಂತಿದೆ, ಆದರೆ ವಿಶ್ವದ ಹಿರಿಯಣ್ಣ ಭಾರತದ ಬೆಂಬಲಕ್ಕೆ‌ ನಿಂತಿದ್ದಾನೆ. ಅಮೇರಿಕಾದ ಈ ನಿತಿಯಿಂದ ಭಾರತಕ್ಕೆ ನೆಮ್ಮದಿಯ ವಾತಾವರಣ ನಿರ್ಮಿಸಿದೆ, ಅಮೇರಿಕಾದ ಸಹಾಯವನ್ನು ಬಳಸಿಕೊಂಡು ಬಡ ಪಾಕ್ ಭಾರತದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸುತ್ತಿತ್ತು ಇದು ಇನ್ನು ಮುಂದೆ ತಗ್ಗಲಿದೆ.

ದಿಕ್ಕೆಟ್ಟ ಪಾಕ್ ಚೀನಾದ ಮಾತು ಕೇಳಿ, ಚೀನಾದ ತೊಡೆಯ ಮೇಲೆ ತನ್ನ ಕೈಯನ್ನು ಉಪಯೋಗಿಸಿ ಅಮೇರಿಕಾಕ್ಕೆ ಸೆಡ್ಡು ಹೊಡೆದಿದೆ, ಅದೇನೆಂದರೆ, ಅಮೇರಿಕಾ ರಾಷ್ಟ್ರದ ಎಂಜಲು ತಿಂದು ಇಲ್ಲಿಯವರೆಗೆ ಗುಪ್ತಚರ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸೇನಾ ಸಹಾಯವನ್ನು ಮಾಡುತ್ತಾ ಬಂದಿದ್ದ ಪಾಕಿಸ್ತಾನ ಇಂದಿನಿಂದ‌ ನಿಲ್ಲಿಸಿದೆ. ಪಾಕ್ ರಾಷ್ಟ್ರ ಕಪಟತನ ಮಾತ್ರ ವಿಶ್ವ ಮಟ್ಟದಲ್ಲಿ ಅಚ್ಚಳಿಯದೆ ಉಳಿದಿದೆ.

Ramanagoud S Biradar

Share this post
Repost0
To be informed of the latest articles, subscribe: