Overblog
Edit post Follow this blog Administration + Create my blog
merabharat.over-blog.com

ಹೆತ್ತ ತಾಯಿ ಹೊತ್ತ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು

ದುಂದು ವೆಚ್ಚವನ್ನು ತಡೆಯಲು ಕಾನೂನು ನಿಯಮವೇ ಇರಬೇಕೆಂದೇನಿಲ್ಲ.


ವಿಧಾನಸೌಧದ ವಜ್ರಮಹೋತ್ಸವದ ಸಂಭ್ರಮಾಚಾರಣೆಯನ್ನು ಸ್ಮರಣೀಯವಾಗಿಸಲು ರಾಜ್ಯ ಸರ್ಕಾರ ಶಾಸಕರಿಗೆ ಚಿನ್ನದ ಬಿಸ್ಕೆಟ್ ಮತ್ತು ಸಿಬ್ಬಂದಿ ಬೆಳ್ಳಿ ತಟ್ಟೆಯನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿತ್ತು. ಮತ್ತು ಈ‌ ಕಾರ್ಯಕ್ರಮಕ್ಕೆ ಅಂದಾಜು  ೨೮   ಕೋಟಿ ಗಳು ವೆಚ್ಚವಾಗುತ್ತದೆ ಎಂದು  ಸರ್ಕಾರ ಅಧಿಕೃತವಾಗಿಯೂ ತಿಳಿಸಿತ್ತು.
ಇದರಿಂದ ಸಾರ್ವಜನಿಕರೂ, ಸಮಾಜದಲ್ಲಿನ ಪ್ರಬುದ್ಧರು, ಮತ್ತು ಮಾಧ್ಯಮಗಳು ಸಾಕಷ್ಟು ವಿರೋಧಪಡಿಸಿದ್ದರಿಂದಾಗಿ, ಕೂಡಲೇ ಸರ್ಕಾರ ೨೮  ಕೋಟಿಯಿಂದ ೧೦ ಕೋಟಿಗೆ ಇಳಿಸಿತ್ತು, ಈ ೧೦ ಕೋಟಿ ರೂಪಾಯಿ ಕೂಡಾ ಸರ್ವಜನಿಕರ ತೆರಿಗೆ ಹಣವಾಗಿದ್ದರಿಂದ  ಸಾರ್ವಜನಿಕರ ತೆರಿಗೆ ಹಣ ಹಾಳು ಮಾಡುವುದು ಅಥವಾ ದುಂದಾಗಿ ಖರ್ಚು ಮಾಡುವುದು ಸರಿ ಅಲ್ಲವೆಂದು ಸಮಾಜದ ಪರವಾಗಿ ವಕೀಲರೊಬ್ಬರು ಸರ್ಕಾರದ ನಡೆ ಕುರಿತು  ಸಾರ್ವಜನಿಕ ಹಿತಾಸ್ಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು, ಇದಕ್ಕೆ ಮಾನ್ಯ ನ್ಯಾಯಾಲಯ ಸರ್ಕಾರಿ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಹಣ ಬಳಕೆ ಮಾಡಬಾರದೆಂದು ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿದೆ.
ಆದರೆ ರಾಜ್ಯದಲ್ಲಿ  ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಮಾಡಿದ ಸಾಲ ತೀರದ ಕಾರಣ ರೈತನು ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.ಕೆಲವೊಂದು ಕಡೆ ಸರಿಯಾಗಿ ಮಳೆಯಾಗದಿರುವ ಕಾರಣ ರೈತ ಬರವನ್ನು ಎದುರಿಸುತ್ತಿದ್ದಾನೆ. ಇನ್ನೊಂದು ಕಡೆ ಅತಿ ಹೆಚ್ಚು ಮಳೆಯಾಗಿ ಇದ್ದ ಬೆಳೆಯು ಹಾಳಾಗಿ ಹೋಗಿದೆ, ಬೆಂಗಳೂರಿನಂತಹ ಮಹಾನ್ ನಗರಗಳಲ್ಲಿ ಸ್ವಲ್ಪ ಮಳೆಯಾದರೆ ಸಾಕು, ಇಡೀ ನಗರವೇ ದ್ವೀಪ ಪ್ರದೇಶದಂತಾಗುತ್ತದೆ. ರಸ್ತೆಗಳಲ್ಲಿ ರುವ ಗುಂಡಿಗಳಂತೂ  ಪ್ರಯಾಣಿಕರನ್ನು ಬಲಿ ತೆಗೆದುಕೊಳ್ಳಲು ಬಾಯಿ ತೆಗೆದು ನಿಂತಿವೆ. ಇಂತಹದನ್ನೆಲ್ಲ ಮಾನ್ಯ ನ್ಯಾಯಾಲಯವು ಪರಿಗಣಿಸಿ, ಅವಶ್ಯಕ ಸಂದರ್ಭಗಳಲ್ಲಿ ಮಾತ್ರ ಜನರ ತೆರಿಗೆ ಹಣವನ್ನು  ಬಳಕೆಯಾಗುವಂತಾಗಲಿ ಮತ್ತು ಅತಿ ಹೆಚ್ಚಾಗಿ   ಸಮಾಜದ ಸುಧಾರಣೆಗೆ ಇಂತಹ ಹಣ ಸದ್ಭಳಕೆಯಾಗುವಂತೆ ನೋಡಿಕೊಂಡು ಹೋಗುವ ಅವಶ್ಯಕತೆ ಇದೆ. ಸಮಾಜದಲ್ಲಿನ ಜನಹಿತದೃಷ್ಟಿಯಿಂದ.

Ramanagoud Biradar

Share this post
Repost0
To be informed of the latest articles, subscribe:
Comment on this post
B
Supper Article bharat mata ki jai
Reply