Overblog
Edit post Follow this blog Administration + Create my blog
merabharat.over-blog.com

ಹೆತ್ತ ತಾಯಿ ಹೊತ್ತ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು

ಭಾರತಕ್ಕೆ ಆತಂಕ ತಂದ ರೋಹಿಂಗ್ಯಾಗ ಆಗಮನ

ಭಾರತಕ್ಕೆ ಆತಂಕ ತಂದ ರೋಹಿಂಗ್ಯಾಗಳ​​​​​ ಆಗಮನ .

ಮ್ಯಾನ್ಮಾರ್ ದೇಶದ   ರ ಕೈನ್ ಪ್ರಾಂತ್ಯದ ಸರಕಾರವು ಬೌದ್ಧ ಧರ್ಮೀಯ ಉಗ್ರವಾದಿ ಗಳೊಂದಿಗೆ ಸೇರಿಕೊಂಡು ರೋಹಿಂಗ್ಯಾ ಜನಗಳ ಮೇಲೆ ಕೋಮು ಹಿಂಸೆ ಮಾಡುವ ಮೂಲಕ ,ರೋಹಿಂಗ್ಯಾ ಮುಸ್ಲಿಮರಿಗೆ ಮ್ಯಾನ್ಮಾರ್ ದೇಶವನ್ನು ಬಿಟ್ಟು ಹೊರ ಹಾಕುತ್ತಿರುವುದರಿಂದ ರೋಹಿಂಗ್ಯಾ ಜನರು ಆಶ್ರಯ ಬಯಸಿ ಅಕ್ಕಪಕ್ಕದ ರಾಷ್ಟ್ರಗಳಾದ ಭಾರತ ಸೌದಿ ಅರೇಬಿಯಾ ಪಾಕಿಸ್ತಾನ ಬಾಂಗ್ಲಾದೇಶ ಮಲೇಶಿಯಾ ಥೈಲ್ಯಾಂಡ್ ನಂತಹ ರಾಷ್ಟ್ರಗಳಲ್ಲಿ ಶಾಶ್ವತ ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದಾರೆ 

ಈ ರೋಹಿಂಗ್ಯಾಗಳು ಅಂದ್ರೆ ಯಾರು ?

ಮಯನ್ಮಾರ್ ದೇಶದ ನೂರ ನಲ್ವತ್ತು ಪಾರಂಪರಿಕ ಜನಾಂಗ ಪೈಕಿ ರೋಹಿಂಗ್ಯಾ ಮುಸ್ಲಿಂ ಜನಾಂಗವು ಕೂಡ ಒಂದು .ಈ ಜನಾಂಗವು ಸುಮಾರು ಏಳನೇ ಶತಮಾನದಿಂದಲೂ ಬರ್ಮದಲ್ಲಿ ಬದುಕು ನಡೆಸಿಕೊಂಡು ಬಂದಿದ್ದಾರೆ ಮ್ಯಾನಮಾರನಲ್ಲಿ ಒಟ್ಟು ಎಂಬತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರಿದ್ದು ಅದರಲ್ಲಿ ನಲವತ್ತು ಲಕ್ಷ ದಷ್ಟು ಜನರು ರೋಹಿಂಗ್ಯಾ    ಮುಸ್ಲಿಮರು ಇದ್ದು .ಶಾಂತತೆಗೆ ಹೆಸರುವಾಸಿಯಾಗಿದ್ದ ಬೌದ್ಧ ಧರ್ಮವು ಕೂಡ ಪಕ್ಕದ ಪಾಕಿಸ್ತಾನದಂತೆ ಧರ್ಮ ಆಧಾರಿತ ದೇಶದ ನಿರ್ಮಾಣ ಮಾಡಲು ಮುಂದಾಗಿದೆಯೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ 

ಅಲ್ಲಿನ ಬರ್ಮಾ ಸರ್ಕಾರವು ಬೌದ್ಧರಾದರೆ ಮಾತ್ರ ಬರ್ಮಿಯರು ಆಗಲು ಸಾಧ್ಯ ಎನ್ನುವಂತಹ ಸಿದ್ಧಾಂತದ  ಕೊಂಡು ನೀವು ಬರ್ಮಾದವರಲ ಬಂಗಾಳಿಗರು ಎಂದು  ರೋಹಿಂಗ್ಯಾ ಗಳನ್ನು ಭರ್ಮಾದಿಂದ  ಹೊರ ಹಾಕುತ್ತಿರುವುದು ಇಡೀ ಮನುಕುಲವೇ ಮರುಗುವಂತೆ ಮಾಡಿದೆ .

ರೋಹಿಂಗ್ಯಾ ಜನಾಂಗಕ್ಕೆ ಬರ್ಮಾ ದೇಶದ ಯಾವ ಹಕ್ಕು ಮತ್ತು ಸರಕಾರಿ ಸೌಲಭ್ಯಗಳು ನೀಡದೆ ಸುಮಾರು  ಹದಿಮೂರು ಶತಮಾನಗಳಿಂದ ನೆಲೆಯೂರಿ ಕೊಂಡು ಬಂದಿರುವ ದಾಖಲೆ ಇದ್ದರೂ ಕೂಡ ಪೌರತ್ವ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿದೆ .

ಭಾರತಕ್ಕೆ ಹೆಚ್ಚಿದ ಆತಂಕ: ಭಾರತ ದೇಶವು ಪಾಕ್ ಭಯೋತ್ಪಾದನೆ, ಚೀನಿ ಅತಿಕ್ರಮಣ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಉಪಟಳ ಮತ್ತು ಬಾಂಗ್ಲಾ ದೇಶಿಗರು ಅಕ್ರಮ ನುಸುಳುಕೋರರಂತಹ  ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರೋಹಿಂಗ್ಯಾ ಜನಗಳ ಆಗಮನ ಭಾರತಕ್ಕೆ ದೊಡ್ಡ ತಲೆನೋವಾಗಿದೆ ಈಗಾಗಲೇ ನಾಲ್ವತ್ತು ಸಾವಿರ   ಜನಗಳು ಭಾರತದ ನಾನಾ ರಾಜ್ಯಗಳಲ್ಲಿ ಅಕ್ರಮವಾಗಿ ನೆಲೆಯೂರಿದ್ದಾರೆ.

ಆದರೆ ಆದರೆ ಜಮ್ಮು ಕಾಶ್ಮೀರ ಪ್ರಾಂತ್ಯದ ಸಾಂಬಾ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ರೋಹಿಂಗ್ಯಾ ಮುಸ್ಲಿಮರು ಜೀವನ ನಡೆಸುತ್ತಿದ್ದು ಇವರಲ್ಲಿ ಕೆಲವೊಂದಿಷ್ಟು ಜನರು ಕಾಶ್ಮೀರ ರಾಜ್ಯದ ಪರ್ಮನೆಂಟ್ ರೆಸಿಡೆಂಟ್ ಪ್ರಮಾಣ ಪತ್ರವನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ ಕಾಶ್ಮೀರದ ಆಸ್ತಿಯನ್ನು ಖರೀದಿಸುವ ಹಕ್ಕನ್ನು ಪಡೆದುಕೊಂಡು ಭಾರತೀಯ ಮೂಲ ನಿವಾಸಿಗರಿಗೆ ತೊಂದರೆ ಒಡ್ಡ ಬಹುದಾಗಿದೆ ಮತ್ತು ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಬಡ ರೋಹಿಂಗ್ಯಾಗಳು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮತ್ತು ಪಾಕ್ ಉಗ್ರರೊಂದಿಗೆ ಕೈಜೋಡಿಸಿ ಉಗ್ರ ಕೃತ್ಯಗಳು ನಡೆಸಬಹುದೆಂಬ ಆತಂಕ ಮೂಡಿದೆ .

ವಿಶ್ವ ವಿಶ್ವ ಸಂಸ್ಥೆ ಮಾತು ನಿಲ್ಲಿಸಿ ಕಾರ್ಯಪ್ರವೃತ್ತ ಆಗಬೇಕಾಗಿದೆ : ಮನುಕುಲದ ಒಳಿತಿಗಾಗಿ ಹುಟ್ಟಿಕೊಂಡಿರುವ ವಿಶ್ವಸಂಸ್ಥೆ ಕೇವಲ ಕಳವಳ ವ್ಯಕ್ತಪಡಿಸುವ ಕೆಲಸ ಮಾತ್ರ ಮಾಡುತ್ತಿದೆ ಇರಾನ್ ಮತ್ತು ಸಿರಿಯಾ ದೇಶಗಳಲ್ಲಿ ಐಸಿಸ್ ಉಗ್ರರು ದಾಳಿ ಮಾಡಿ ಸಹಸ್ರಾರು ಜನರನ್ನು ಕೊಂದು ಹಾಕಿದಾಗ ಕೇವಲ ಮಾತನಾಡಿದೆ ವಿನಃ ಕಾರ್ಯಪ್ರವೃತ್ತ ವಾಗಲಿಲ್ಲ ಇಲ್ಲಿಯೂ ಕೂಡ ಅದೇ ರೀತಿ ವರ್ತಿಸುತ್ತಿರುವುದು ಇಡೀ ಮನುಕುಲವೇ ವಿಶ್ವಸಂಸ್ಥೆ ಕಾರ್ಯವನ್ನು  ಪ್ರಶ್ನಿಸುವಂತಾಗಿದೆ .Ramanagoud S Biradar.

Share this post
Repost0
To be informed of the latest articles, subscribe:
Comment on this post
M
nicr
Reply